ತನ್ನ ಮುಗ್ಧ ಮುಗುಳ್ನಗೆ, ಸಿಘ್ದ ಲಾವಣ್ಯ, ಹಾಗೂ ಅಪರಿಮಿತ ಸಂದರ್ಯಗಳ ಖಣಿಯಾಗಿರುವ ಕತ್ರೀನ ಕೈಫ್ ಚಿತ್ರರಸಿಕರ ಮನವನ್ನು ಸೂರೆಗೊಂಡಿದ್ದಾಳೆ. ಅತಿ-ಸೆಕ್ಸೀ ಕನ್ಯೆ ಎಂಬ ಹಣೆಪಟ್ಟಿ ಅವಳಿಗೆ ಬಂದಿದೆ. ಚಿತ್ರ-ನಟನೆ, ಇನ್ನೂ ಅವರು ಕಲಿಯಬೇಕಾದ ಪಾಠವಾಗಿದೆ. == ಜನನ ಹಾಗೂ ಬಾಲ್ಯ == ಕತ್ರೀನಾರ ತಂದೆ, 'ಕೈಫ್'. ಅಪ್ಪಟ ಕಾಶ್ಮೀರದ ಮುಸಲ್ಮಾನರು. ತಾಯಿ, 'ಸುಸಾನ್,' ಬ್ರಿಟಿಷ್ ಮೂಲದ ಕ್ರಿಶ್ಚಿಯನ್ನರು. ಹುಟ್ಟಿದ್ದು, ಹಾಂಕಾಂಗ್ ನಲ್ಲಿ. ೧೯೮೪ ರ ಜುಲೈ, ೧೬ ರಂದು. ಬೆಳೆದದ್ದು ಇಂಗ್ಲೆಂಡ್ ನಲ್ಲಿ. ಈಗ ಕತ್ರೀನಾ, ಹಲವು ವರ್ಷಗಳಿಂದ ಮುಂಬೈನಲ್ಲಿ ನೆಲೆಸಿದ್ದು, ಬಾಲಿವುಡ್ ನಲ್ಲಿ ತನ್ನ ನಟನೆಯ ಅಸ್ತಿತ್ವವನ್ನು ಕಂಡುಕೊಳ್ಳಲು ಹವಣಿಸುತ್ತಿದ್ದಾಳೆ. ಅಮ್ಮ, 'ಹಾರ್ವರ್ಡ್ ವಿಶ್ವವಿದ್ಯಾಲಯದ ಕಾನೂನು ಪದವೀಧರೆ,' ಕತ್ರೀನಾ ಇನ್ನೂ ಚಿಕ್ಕವಳಿದ್ದಾಗಲೇ ತಂದೆ-ತಾಯಿ ಬೇರೆಯಾದರು. ಅದರ ತರುವಾಯ ಕತ್ರೀನಾ, ಅಮ್ಮನ ಜೊತೆಗೆ ಬಂದು ಇಂಗ್ಲೆಂಡ್ ನಲ್ಲೇ ನೆಲೆಸಿದಳು. ಅವಳಿಗೆ, ೭ ಜನ ಸಹೋದರಿಯರಿದ್ದಾರೆ. ೧೪ ನೇ ವಯಸ್ಸಿನಲ್ಲೇ 'ಮಾಡಲಿಂಗ್,' ಮಾಡಲು ಶುರುಮಾಡಿದಳು. ಮನೆಯ ಅಸ್ಥಿರ-ಪರಿತ್ಶಿತಿ, ಮತ್ತು ಬಿಡುವಿಲ್ಲದ ವಾತಾವರಣದಿಂದಾಗಿ, ಸ್ಕೂಲ್ ನಂತರ ಕಾಲೆಜ್ ಮೆಟ್ಟಿಲು ಹತ್ತಲೇ ಇಲ್ಲ. == 'ಕೈಝಾದ್ ಗುಸ್ತಾದ್' ರವರು,ಕತ್ರೀನಾಗೆ, ಬಾಲಿವುಡ್ ಗೆ, ಬರಲು ಆಹ್ವಾನಿಸಿದರು == 'ಕೈಝಾದ್ ಗುಸ್ತಾದ್', 'ಬೂಮ್,' ಚಿತ್ರದಲ್ಲಿನ ಪಾತ್ರಕ್ಕಾಗಿ ಮುಂಬೈನ ಬಾಲಿವುಡ್ ಗೆ ಬರಲು ಆಹ್ವಾನಿಸಿದರು. ಮುಂಬೈನಲ್ಲಿ ಮಾಡೆಲಿಂಗ್ ಮಾಡುತ್ತಿದ್ದ ಅವರಿಗೆ ಚಿತ್ರಗಳಲ್ಲಿ ಅಂತಹ ಅವಕಾಶಗಳು ಸಿಗಲಿಲ್ಲ. 'ಸಲ್ಮಾನ್ ಖಾನ್', ಜೊತೆಗಿನ ಗೆಳೆತನದಿಂದ ಅವಳು ಪ್ರಸಿದ್ಧಿಪಡೆದಳು. ಅವಳ ಹಿಂದಿ ಉಚ್ಚಾರಣೆ ಬ್ರಿಟಿಷ್ ಶೈಲಿಯದಾಗಿತ್ತು. ಹಿಂದಿ ಭಾಷೆ ಮಾತಾಡಲು ಬರುತ್ತಿರಲಿಲ್ಲ. ಆಗ, ಕತ್ರಿನಾಗೆ ನೆರವಾದವರು, 'ಅಕ್ಷಯ್ ಕುಮಾರ್'. ಅವರ ಜೊತೆ ಮಾಡಿದ ಚಿತ್ರಗಳು ಜನರಿಗೆ ಸ್ವಲ್ಪ-ಪ್ರಿಯವಾದವು. ಕತ್ರೀನಾ-ಸಲ್ಮಾನ್ ಜೋಡಿಯಲ್ಲಿ ನಿರ್ಮಿಸಿದ 'ಯುವರಾಜ್,' ಚಿತ್ರ, ನಿರೀಕ್ಷಿಗೆ ತಕ್ಕಂತಿರದ 'ಫ್ಲಾಪ್,' ಆಯಿತು. ಇತ್ತೀಚಿಗಷ್ಟೇ ತೆರೆಕಂಡ 'ಜಾನ್, 'ನೀಲ್ ನಿತಿನ್,' ಜೊತೆಗೆ ನಟಿಸಿದ ಇನ್ನೊಂದು ಚಿತ್ರ, ನ್ಯೂಯಾರ್ಕ್, ಬಾಕ್ಸ-ಆಫೀಸ್ ನಲ್ಲಿ, ಯಶಸ್ಸನ್ನು ಕಂಡು ಮುನ್ನುಗ್ಗುತ್ತಿದೆ .ಕತ್ರೀನಾಗೆ, ನಟನೆ ಬರುವುದಿಲ್ಲ. ಭಾಷೆ ಅಷ್ಟಕ್ಕಷ್ಟೆ, ಎಂದು ಎಲ್ಲರೂ ಮೂಗುಮುರಿಯುತ್ತಿದ್ದರು. ಈಗ ಅವರು ಅದನ್ನು ಬದಲಾಯಿಸಬೇಕಾಗಿದೆ. == ೨೦೦೮ ರ ಏಷ್ಯಾದ 'ಅತಿ ಸೆಕ್ಸೀ-ಯುವನಟಿ,'ಕತ್ರೀನಾ' == ೨೦೦೮ ರ ಏಷ್ಯಾದ 'ಅತಿ ಸೆಕ್ಸೀ ಯುವ-ನಟಿ,' ಯೆಂದು ಆಯ್ಕೆಯಾಗಿದ್ದಾಳೆ. ಮತ್ತೊಂದು ವಿಕ್ರಮ ಅವಳಿಗೆ ಗೊತ್ತಿಲ್ಲದಂತೆ ಅಂಟಿದ್ದು, 'ಇಂಟರ್ನೆಟ್' ನ, 'ಗೋಗಲ್ ಶೋಧ,' ದಲ್ಲಿ ಅತಿ ಹೆಚ್ಚು ಬಾರಿ ಹುಡುಕಿದ 'ಭಾರತೀಯ ಸೆಲೆಬ್ರಿಟಿ,' ಯ ಖ್ಯಾತಿ ಅವಳಿಗಿದೆ. ಭಾರತದ 'ಬಾರ್ಬಿ ರೂಪದರ್ಶಿ,' ಯಾಗಿದ್ದಾಳೆ. 'ಯುವ-ಹೃದಯಗಳ ಮಿಡಿತಗಳ ವೇಗವನ್ನು ಹೆಚ್ಚಿಸುವ ಪಟ್ಟದರಸಿ,' ಎಂದೇ ಪ್ರಖ್ಯಾತಿಯಾಗಿದ್ದಾರೆ. == ಹಿಂದಿ ಚಲನ-ಚಿತ್ರರಂಗದಲ್ಲಿ ಇನ್ನೂ ಹೆಸರುಮಾಡುವುದಿದೆ == ಕತ್ರೀನಾ, ಒಬ್ಬ ಅಂದ-ಚೆಂದದ, ಅತ್ಯಂತ ಆಕರ್ಷಕ ಅಂಗಸೌಷ್ಟವದ, ಚೆಲುವಿನ ನಗೆಮೊಗದ, ಯುವತಿ. ಅವರು ಜಾಹಿರಾತ್ ವಲಯದಲ್ಲಿ ಪ್ರಚಂಡ ಚನಪ್ರಿಯತೆಯನ್ನು ಹೊಂದಿದ್ದಾರೆ. ಹಿಂದಿ ಚಲನಚಿತ್ರಗಳಲ್ಲಿ ಹೆಚ್ಚಿನ ನಟನಾಭಿನಯಕಲಿಯುತ್ತಿದ್ದಾರೆ. ಬಳಕೆಯ ಹಿಂದಿಭಾಷೆಯನ್ನೂ ಕಲಿಯುತ್ತಿದ್ದಾರೆ. == ಫಿಲ್ಮೋಗ್ರಾಫಿ == == ಪ್ರಶಸ್ತಿಗಳು == === ಬಿಗ್ ಸ್ಟಾರ್ ಎಂಟರ್ಟೈನ್ಮೆಂಟ್ ಪ್ರಶಸ್ತಿ === == ಉಲ್ಲೇಖಗಳು ==